ಐ.ಡಿ ಕಾರ್ಡ್ ರಿನೀವಲ್‍ಗೆ ಮಾನದಂಡಗಳು

ಕನಸಿನ ಭಾರತ ಐ.ಡಿ ಕಾರ್ಡ್‍ಗಳು 30 ಮೇ 2020 ರಂದು ಅವಧಿಯನ್ನು ಕಳೆದುಕೊಂಡು ಅಮಾನ್ಯವಾಗುತ್ತವೆ. 1ನೇ ಜೂನನಿಂದ 2020 ರಿಂದ ಹೊಸ ಮಾದರಿಯ ಐ.ಡಿ ಕಾರ್ಡ್‍ಗಳನ್ನು ಕನಸಿನ ಭಾರತವು ನೀಡುತ್ತದೆ. ಮೊದಲಿಗಿಂತಲೂ ನವೀನ ಮತ್ತು ಅತ್ಯಂತ ಭದ್ರತೆಯ ಆಧಾರದ ಮೇಲೆ ಸುರಕ್ಷಿತ ತಾಂತ್ರಿಕತೆಯನ್ನು ಬಳಸುವುದರಿಂದ ಐ.ಡಿ ಕಾರ್ಡ್ ನಕಲು ಮಾಡಲು ಸಾಧ್ಯವೇ ಇಲ್ಲ. ಇಂತಹ ಕಾರ್ಡ್ ಪಡೆಯುವ ಅರ್ಹತೆಯ ಮಾನದಂಡಗಳನ್ನು ರೂಪಿಸುತ್ತಿದ್ದು ಅಂತಹ ಕೇಲವು ಮಾನದಂಡಗಳನ್ನು ತಮ್ಮಗೆ ತಿಳಿಯಪಡೆಸುತ್ತಿದ್ದೇವೆ.

ಪ್ರಮುಖ ಮಾನದಂಡಗಳು
1) ಕನಸಿನ ಭಾರತ ಅಜೀವ ಸದಸ್ಯತ್ವ 25 ಮತ್ತು ವಾರ್ಷಿಕ ಚಂದಾ 100 ಗಳನ್ನು 30 ಮೇ 2020 ಒಳಗಾಗಿ ಮಾಡಿಸಲೇಬೇಕು.
2) ಪತ್ರಿಕೆಯ ಸಾಮಾನ್ಯ ಹಾಗೂ ಕನಿಷ್ಠ ಕೆಲಸಗಳನ್ನು ಮಾಡಬೇಕು.
3) ಮಾಧ್ಯಮದ ಬಗ್ಗೆ ಬರುವ ಸುದ್ಧಿಗಳು/ಮುಖ್ಯ ಕಛೇರಿಯ ವಿಚಾರಗಳನ್ನು ನಿಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಬೇಕು.
4) ಸುದ್ಧಿಗಳನ್ನು ಕಳಿಸಬೇಕು.

 

ಯಾರ ಐ.ಡಿ ಕಾರ್ಡ್‍ಗಳು ರಿನೀವಲ್ ಆಗುತ್ತವೆ ?

1) ಇದುವರಿಗೂ ಪ್ರಾಮಾಣಿಕವಾಗಿ ಪತ್ರಿಕೆಯ ಕೆಲಸಗಳಲ್ಲಿ ತೊಡಗಿಕೊಂಡವರ
2) ಸದಸ್ಯತ್ವ ಮತ್ತು ಚಂದಾ ಮಾಡಿಸಿದವರ
3) ಪತ್ರಿಕೆಯ ಕನಿಷ್ಠ ಕೆಲಸಗಳಲ್ಲಿ ತೊಡಗಿದವರ

ಯಾರ ಐ.ಡಿ ಕಾರ್ಡ್‍ಗಳು ರಿನೀವಲ್ ಆಗುವುದಿಲ್ಲ ?

1) ಇದುವರಿಗೂ ಕೆಲಸ ಮಾಡದವರ ಐ.ಡಿ ಕಾರ್ಡ್‍ಗಳು
2) ಚಂದಾ/ಸದಸ್ಯತ್ವ ಮಾಡಸದವರ
3) ಕನಿಷ್ಠ ಕೆಲಸ ಕಾರ್ಯಗಳನ್ನು ಮಾಡದವರು.
4) ಪತ್ರಿಕೆ/ಮಾಧ್ಯಮದ ಬಗ್ಗೆ ಕೆಟ್ಟದಾಗಿ ಪ್ರಚಾರ/ಮಾತನಾಡಿದವರ
5) ಪತ್ರಿಕೆಯ ಹೆಸರಿನಲ್ಲಿ ಮೋಸ/ವಂಚನೆ ಮಾಡುವವರ
6) ಕನಸಿನ ಭಾರತ ಮತ್ತು ಟಿ.ವಿ23 ಕನ್ನಡ ಮಾದ್ಯಮಗಳನ್ನು ಹೊರತು ಪಡಿಸಿ ಬೇರೆ ಮಾಧ್ಯಮದಲ್ಲಿ ಕೆಲಸ ಮಾಡುವವರನ್ನು ಕಿತ್ತು ಹಾಕಲಾಗುವುದು.
7) ಮುಖ್ಯ ಕಛೇರಿಯ ಜೊತೆಗೆ ಸಂಪರ್ಕ ಇಟ್ಟುಕೊಳ್ಳದವರ
8) ಕೆಟ್ಟ ವರ್ತನೆ ತೋರಿದವರ
9) ಐ.ಡಿ ಕಾರ್ಡ್‍ನ್ನು ದುರುಪಯೋಗ ಪಡಿಸಿಕೊಂಡವರ

ಕನಸಿನ ಭಾರತವು ಅತ್ಯಂತ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಯಾವುದೇ ಲಾಭಿ, ಕೆಲಸ ಮಾಡದವರ ನಯವಾದ ಮಾತುಗಳಿಗೆ ಐ.ಡಿ ಕಾರ್ಡ್‍ಗಳನ್ನು ರಿನೀವಲ್ ಮಾಡುವುದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಪ್ರೊತ್ಸಾಯಿಸುವ ಉದ್ದೇಶದಿಂದ ತಾಲೂಕಿಗೆ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಸಂಪಾದಕರನ್ನು ಬಿಟ್ಟು ಬೇರೆ ಯಾರೇ ಹೇಳಿದರೂ ಐ.ಡಿ ಕಾರ್ಡ್ ರಿನೀವಲ್ ಆಗುವುದಿಲ್ಲ. ಸಂಪಾದಕರು ಕೇವಲ ಕೆಲಸದ ಆಧಾರದ ಮೇಲೆ ಐ.ಡಿ ನವೀಕರಿಸುತ್ತಾರೆ.
ಕನಸಿನ ಭಾರತದ ಎಲ್ಲ ಮಾನದಂಡಗಳನ್ನು ಪೂರೈಸಿ ಐ.ಡಿ ಕಾರ್ಡ್ ರಿನೀವಲ್ ಆಗುವವರಿಗೆ ಹೊಸ ಐ.ಡಿ ಕಾರ್ಡ್‍ಗಳು ಕೊರಿಯರ್ ಮೂಲಕ ನೇರವಾಗಿ ಕಳಿಸಲಾಗುವುದು. ಇದಕ್ಕೆ ಯಾವುದೇ ರೀತಿಯ ಹಣ ಪಾವತಿ ಇರುವುದಿಲ್ಲ, ಸಂಪೂರ್ಣ ಉಚಿತವಾಗಿರುತ್ತದೆ.
30 ಮೇ 2020 ರಂದು ಒಂದು ವೇಳೆ ನಿಮ್ಮ ಐ.ಡಿ ರಿನೀವಲ್ ಆಗದಿದ್ದರೆ ಅಂದರೆ ಕಂಪನಿಯ ಮಾನದಂಡಗಳ ಆಧಾರದ ಮೇಲೆ ಸಂಪಾದಕರಿಗೆ ಕರೆ ಮಾಡಿ ಮಾತನಾಡಿ. ನಿಮ್ಮ ಐ.ಡಿ ಕಾರ್ಡ್ ಮತ್ತು ಬಿಲ್ ಬುಕ್ ನು ತಕ್ಷಣ ಈ ವಿಳಾಸಕ್ಕೆ –

ಸಂಪಾದಕರು

ಕನಸಿನ ಭಾರತ

1/1 ರಾಧಾಕೃಷ್ಣ ಕಾಂಪ್ಲೇಕ್ಸ್

2ನೇ ಮಹಡಿ,204

ಕೆನರಾ ಬ್ಯಾಂಕ್ ಮೇಲೆ,

ಡಾ.ರಾಜಕುಮಾರ ರಸ್ತೆ,

6ನೇ ಹಂತ, ರಾಜಾಜಿನಗರ

ಬೆಂಗಳೂರು-560010

ಕ್ಕೆ 7 ದಿನಗಳ ಒಳಗಾಗಿ ಕಳಿಸಲೇಬೇಕು.
ಕನಸಿನ ಭಾರತ ಐ.ಡಿ ಕಾರ್ಡ್ ರಿನೀವಲ್ ಆಗದಿದ್ದಾಗ / ನಿಮ್ಮ ಕ್ಯೂ.ಆರ್. ಕೋಡ್ ಬ್ಲಾಕ್ ಆದಾಗ / ಸಂಪಾದಕರ ವಿವೇಚನೆ ಆದಾರದಲ್ಲಿ ವರದಿಗಾರರನ್ನು ತೆಗೆದುಹಾಕಿದಾಗ / ತಾವು ಸ್ವ-ಇಚ್ಚೆಯಿಂದ ರಾಜೇನಾಮೆ ನೀಡಿದಾಗ ತಕ್ಷಣ ಐ.ಡಿ ಕಾರ್ಡ್ ಮತ್ತು ಬಿಲ್ ಬುಕ್ ಅನ್ನು ಮುಖ್ಯ ಕಚೇರಿ ಕಳಿಸಬೇಕು. ಪತ್ರಿಕೆಯಿಂದ ಹೊರಹೋದ ನಂತರ ತಮ್ಮ ಬಳಿಯೇ ಐ.ಡಿ ಕಾರ್ಡ್ ಮತ್ತು ಬಿಲ್ ಬುಕ್ ಇಟ್ಟುಕೊಳ್ಳುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಐ.ಡಿ ಕಾರ್ಡ್ ಮತ್ತು ಬಿಲ್ ಬುಕ್ ಪತ್ರಿಕೆಗೆ ಸೇರಿದ್ದು, ಅವಧಿ ಮುಗಿದ ನಂತರವು ಇವುಗಳನ್ನು ಬಳಸುವುದು ಅಥವಾ ಇಟ್ಟುಕೊಳ್ಳುವುದ ಪತ್ರಿಕೆ ಮತ್ತು ಕಾನೂನು ನಿಯಮಗಳಿಗೆ ಇರುದ್ಧವಾಗಿದ್ದು ಅಂತಹವರ ಇರುದ್ದ ಕಾನೂನು ಪ್ರಕಾರ ಕಠಿಣ ಕ್ರಮಕೈಗೊಳ್ಳಲಾಗುವುದು.

ಸಂಪಾದಕ ಮಂಡಳಿ

Leave a Reply

Your email address will not be published. Required fields are marked *

X