ಅಭಿಮಾನ ಪೂರ್ವಕ ಧನ್ಯವಾದ

ಆತ್ಮೀಯ ವರದಿಗಾರರೇ

ಅಭಿಮಾನ ಪೂರ್ವಕ ಧನ್ಯವಾದ ಹೇಳುವ ಜೊತೆಗೆ ಇನ್ನಷ್ಟು ಜವಾಬ್ದಾರಿಗಳನ್ನು ತಮಗೆ ಜ್ಞಾಪಿಸುವ ಪ್ರಯತ್ನವೇ ಈ ಪತ್ರದ ಮೂಲಕ ಮಾಡಲಾಗುತ್ತಿದ್ದು, ಪ್ರತಿಯೊಬ್ಬ ವರದಿಗಾರರು ಗಮನವಿಟ್ಟು ಈ ಪತ್ರವನ್ನು ಸಂಪೂರ್ಣವಾಗಿ ಓದಲೇಬೇಕು. ಕನಸಿನ ಭಾರತವು ಅತ್ಯಂತ ದೊಡ್ಡ ಬಳಗವನ್ನು ಹೊಂದಿದ್ದು, ಆ ಕಾರಣದಿಂದ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಕರೆ ಮಾಡಿ ಮಾತನಾಡಲು ಸಾಧ್ಯವಾಗದೇ ಇರಬಹುದು. ಅನ್ಯತಾ ಭಾವಿಸದೇ ಈ ಪತ್ರವನ್ನು ಸಂಪೂರ್ಣ ಓದಿ ಮತ್ತು ಅರ್ಥೈಸಿಕೊಂಡು ನಂತರವೂ ಏನಾದರೂ ಗೊಂದಲಗಳು ಇದ್ದರೆ ಖಂಡಿತ ಕರೆ ಮಾಡಿ ಮಾತನಾಡಿ.

ತಮ್ಮೆಲ್ಲರ ಸಹಕಾರದಿಂದ ಕನಸಿನ ಭಾರತ 9ನೇ ವಸಂತಕ್ಕೆ ಕಾಲಿಟ್ಟಿರುವುದು ಅತ್ಯಂತ ಸಂತೋಷದ ವಿಷಯ. ಈ ಸಂತೋಷವನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳುತ್ತಿರುವುದು ನನಗೆ ಅತ್ಯಂತ ಸಂತಸ ತಂದಿದೆ.
ಈ ಬೆಳವಣೆಗೆಗೆ ನಿಮ್ಮೇಲ್ಲರ ಸಹಕಾರ ಸಲಹೆ ಹೊಣೆಗಾರಿಕೆಯ ಕೆಲಸವೇ ಕಾರಣ. ಈ ಪಯಣದಲ್ಲಿ ನಮ್ಮನ್ನು ಹರಿಸಿ ಹಾರೈಸಿ ಬೆಳಸಿದ್ದಿರಿ ಅದಕ್ಕಾಗಿ ನಿಮಗೆ ಅನಂತ ವಂದನೆಗಳು.
ಈ 9 ವಸಂತಗಳು ಬೆಳೆದು ಬಂದ ರೀತಿ ಅತ್ಯಂತ ರೋಚಕವಾದ ಸನ್ನಿವೇಶವು ನಮ್ಮ ನೆನಪಿನ ಪಠಣದಲ್ಲಿ ಅಳಿಸದೇ ಚಿರಸ್ಥಾಯಿ ಆಗಿ ಉಳಿದಿದೆ. ಕನಸಿನ ಭಾರತ ಭವಿಷ್ಯದ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಅದರ ಅನುಷ್ಠಾನವು ತಮ್ಮೆಲ್ಲರ ಕೈಯಲ್ಲೇ ಇದೆ. ಈಗ ಸಂಪೂರ್ಣ ಮಾಹಿತಿಯ ಬಗ್ಗೆ ತಿಳಿಯೋಣ
ಕನಸಿನ ಭಾರತ ವಾರ,ಪಾಕ್ಷಿಕ ಮತ್ತು ಮಾಸ ಪತ್ರಿಕೆಗಳು ಪ್ರಕಟವಾಗುತ್ತಿದ್ದು, ಕನಸಿನ ಭಾರತ ಮಾಸ ಪತ್ರಿಕೆಗೆ 9 ವರ್ಷಗಳು ನಡೆಯುತ್ತಿದ್ದು, ವಾರ ಮತ್ತು ಪಾಕ್ಷಿಕ ಪತ್ರಿಕೆಗಳು ಇತ್ತಿಚಿಗೆ ಪ್ರಸರಣ ಪ್ರಾರಂಭವಾಗಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳನ್ನು ಪತ್ರಿಕೆಯೂ ವ್ಯಾಪಿಸಿದ್ದು, ಚಂದಾದಾರರಿಗೆ ಅಂಚೆ ಮೂಲಕ ಮತ್ತು ಬಸ್ ಮೂಲಕ ವರದಿಗಾರರಿಗೆ ತಲುಪಿಸಲಾಗುತ್ತಿದ್ದು ನಾಡಿನ ಉದ್ದಕ್ಕೂ ಪತ್ರಿಕೆಯನ್ನು ಹರಡುವ ಜವಾಬ್ದಾರಿಯೂ ನಮ್ಮೆಲ್ಲರ ಮೇಲೆ ಇದ್ದು ಇನ್ನಷ್ಟು ಪರಿಣಾಮಕಾರಿ ಆಗಿ ಮಾಡಬೇಕಾದ ಸಮಯ ಇದಾಗಿದೆ.
ಕನಸಿನ ಭಾರತ ಮಾಸ ಪತ್ರಿಕೆ – ಕನಸಿನ ಭಾರತ ಮಾಸ ಪತ್ರಿಕೆಯು ಪ್ರಾರಂಭವಾಗಿ 8 ವರ್ಷ ಮುಗಿದು 9ನೇ ವರ್ಷ ಪ್ರಾರಂಭವಾಗಿದ್ದು ಸಂತಸದ ವಿಷಯ. ಈ 8 ವಸಂತಗಳು ಪತ್ರಿಕೆಯೂ ನಿರಂತರವಾಗಿ ರಾಜ್ಯ ವ್ಯಾಪ್ತಿ ತಲುಪಿದ್ದು ತಮ್ಮೆಲ್ಲರ ಸಹಕಾರದಿಂದ ಅದಕ್ಕಾಗಿ ಮತ್ತೊಮ್ಮೆ ತಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.ಈಗ ಕನಸಿನ ಭಾರತ ಇನ್ನಷು ಹೊಸ ವಿಚಾರಗಳೊಂದಿಗೆ ಇತಿಹಾಸ,ಕಾನೂನು, ಆಧ್ಯಾತ್ಮ, ರಾಜಕೀಯ ವಿಶ್ಲೇಷಣೆ, ಕವನ,ಕಥೆ,ಚುಟುಕು, ಸಾಹಿತ್ಯ, ಪ್ರತಿಭೆಗಳ ಅನಾವರಣ, ಆರೋಗ್ಯ,ಅಡುಗೆ, ಮಹಿಳೆಯರಿಗೆ ಉಪಯುಕ್ತ ಮಾಹಿತಿ, ತಂತ್ರಜ್ಞಾನ,ವಿಜ್ಞಾನ,ಉದ್ಯೋಗ ಮಾಹಿತಿ, ಚಲನಚಿತ್ರ,ರಂಗಭೂಮಿ, ಕಲೆ, ವಿಚಾರ-ವಿನಿಮಯ, ವಿಕಸನ, ಮನೋವೈಜ್ಞಾನಿಕ ಸತ್ಯ, ಧರ್ಮ,ಅರ್ಥ,ನುಡಿಮುತ್ತುಗಳು, ವಿಶೇಷ ತಜ್ಞರ ಲೇಖನಗಳು, ಬರಹ, ದೇಶ,ದೇಶಾಭಿಮಾನ,ಭಾಷೆ ಸ್ಥಳೀಯ ಸುದ್ದಿಗಳು ಇನ್ನು ಮುಂತಾದ ವಿಷಯಗಳ ಬೃಹತ ಆಗರವೇ ಕನಸಿನ ಭಾರತ ಮಾಸ ಪತ್ರಿಕೆ.ಇದಕ್ಕೂ ಮಿಗಿಲಾಗಿ ದೇಶ ಮತ್ತು ಪ್ರಾದೇಶಿಕ ಸಕಾರಾತ್ಮ ಸುದ್ಧಿಗಳು ಮತ್ತು ಅವುಗಳ ವಿಶ್ಲೇಷಣೆ ಪ್ರಕಟಿಸಲಾಗುವುದು.ಇಂತಹ ಅಭೂತಪೂರ್ವ ಪತ್ರಿಕೆಯೂ ಪ್ರತಿಯೊಬ್ಬರಿಗೂ ತಲುಪಿಸುವ ಪ್ರಯತ್ನ ಪ್ರತಿಯೊಬ್ಬ ವರದಿಗಾರರು ಮಾಡಬೇಕು.
ಅಜೀವ ಸದಸ್ಯತ್ವ- ಕನಸಿನ ಭಾರತ ಮಾಸ ಪತ್ರಿಕೆಗೆ ಅಜೀವ್ ಸದಸ್ಯತ್ವ ಮಾಡಿಸಬೇಕು. ಅಜೀವ್ ಸದಸ್ಯತ್ವವು ಕೇವಲ ರೂ.6150/ ಮಾತ್ರ ಇದ್ದು, ಈ ಚಂದಾದಾರ ಮಾಡಿಸುವ ಮೂಲಕ ಪತ್ರಿಕೆಯ ಬೆಳವಣೆಗೆಗೆ ಸಹಕರಿಸಬೇಕು.
6150 ಯೋಜನೆ- ಕನಿಷ್ಠ 16000 ಚಂದಾದಾರನಾಗಿಸುವ ಮೂಲಕ ಆ ಹಣವನ್ನು ಬ್ಯಾಂಕ್‍ನಲ್ಲಿ ಎಫ್.ಡಿ ಇಟ್ಟು ಅದರಿಂದ ಬರುವ ಬಡ್ಡಿಯಲ್ಲಿ ಪ್ರತಿ ತಿಂಗಳು ಪತ್ರಿಕೆ ಪ್ರಕಟಣೆ ಮತ್ತು ಚಂದಾದಾರರಿಗೆ ತಲುಪಿಸುವುದು ಮತ್ತು ಪ್ರತಿವರ್ಷ ದೇಶಾಭಿಮಾನ ಮೂಡುವಂತಹ 3ದಿನಗಳ ಕಾರ್ಯಕ್ರಮ ಆಯೋಜನೆಯನ್ನು ಮಾಡಿ,ಅಲ್ಲಿ ಸ್ಥಳೀಯ ಪ್ರತಿಭೆ ಮತ್ತು ಸಂಸ್ಕøತಿಯ ಮೂಲಕ ದೇಶಾಭಿಮಾನ ಮೂಡಿಸುವುದು ಹಾಗೂ 3 ಜನ ಪ್ರಗತಿಪರ ರೈತರಿಗೆ, 2 ಸೈನಿಕರಿಗೆ ತಲಾ 25,000 ಹಣ ಮತ್ತು ಸನ್ಮಾನ ಮಾಡುವ ಮೂಲಕ ಅಭಿನಂದಿಸಲಾಗುವುದು ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಒಂದು ಹಳ್ಳಿಯಲ್ಲಿ ಮಾಡಿ, ಗಣ್ಯರನ್ನು ಅಲ್ಲಿ ಕರೆಸುವ ಮೂಲಕ ಗ್ರಾಮಗಳ ಪ್ರಗತಿಯ ಮೂಲಕ ರಾಮರಾಜ್ಯ ಕನಸನ್ನು ನನಸಾಗಿಸುವ ಪ್ರಯತ್ನ ಮಾಡಲಾಗುತ್ತದೆ. ರಾಜ್ಯದ ಸೈನಿಕರು ಗಡಿಯಲ್ಲಿ ಅಪಘಾತವಾಗಿ ಸತ್ತರೇ ಅವರ ಮನೆಗೆ ತಕ್ಷಣ 50,000ವರೆಗೆ ಧನ ಸಹಾಯ ಮಾಡುವ ಮೂಲಕ ಸಹಾಯ ಜೊತೆಗೆ ಸಹಾಯ-ಸಹಕಾರ ನೀಡಲಾಗುತ್ತದೆ. ಇಂತಹ ಅದ್ಬುತ ಕಾರ್ಯ ಮಾಡುವ ಸಲುವಾಗಿ ಕೇವಲ 6150 ರೂ. ಮಾತ್ರ ಪಡೆಯಲಾಗುತ್ತದೆ.
ಅಜೀವ ಸದಸ್ಯರಿಗೆ ಲಾಭಗಳು
1) ಪ್ರತಿವರ್ಷ ಅವರ ಅಥವಾ ಅವರು ಸೂಚಿಸುವವರ ಹುಟ್ಟುಹಬ್ಬ ಅಥವಾ ಮದುವೆ ದಿನದ ಶುಭಾಷಯಗಳನ್ನು ಪತ್ರಿಕೆಯ ವತಿಯಿಂದ ಪ್ರಕಟಿಸಲಾಗುವುದು
2) ಸದಸ್ಯರು ನೀಡುವ ಯಾವುದೇ ಜಾಹೀರಾತು ದರದ ಮೇಲೆ 30% ರಷ್ಟು ರಿಯಾಯಿತಿ ದೊರೆಯುವುದು.
3) ಅಜೀವ ಅಂದರೆ ಜೀವನಪರ್ಯಂತ ಅಂಚೆ ಮೂಲಕ ಕಳಿಸಲಾಗುವುದು
4) ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನ ಇರುತ್ತದೆ.

ಮೊದಲ ಹಂತ- ಈ ಪ್ರಯತ್ನದಲ್ಲಿ ಮೊದಲ ಹಂತವಾಗಿ ರಾಜಕಾರಣಿಗಳು ( ಒಐಂ,ಒP,ಒಐಅ ) ರಾಜಕೀಯ ಮುಂಖಡರು, ಸರ್ಕಾರಿ ಅಧಿಕಾರಿಗಳು(ಗ್ರಾಮ ಪಂಚಾಯತ,ತಾಲೂಕ ಪಂಚಾಯತ,ಜಿಲ್ಲಾ ಪಂಚಾಯತ, ತಾಲೂಕ ದಂಡಾಧಿಕಾರಿಗಳು, ರಿಜಿಸ್ಟರ್ ಆಪೀಸ್, ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ,ಕೃಷಿ ಇಲಾಖೆ, ಆರೋಗ್ಯ ಇಲಾಖೆ,ಯುವಜನ ಮತ್ತು ಕ್ರೀಡಾ ಇಲಾಕೆ, ನೀರಾವರಿ ಇಲಾಖೆ, ರೇಷ್ಮೆ ನಿಗಮ, ಅರಣ್ಯ ಇಲಾಖೆ ನಗರ ಪಾಲಿಕೆ,ಪಟ್ಟಣ ಪಂಚಾಯತಿ ಇನ್ನು ಮುಂತಾದ ಇಲಾಖೆಗಳ ಅಧಿಕಾರಿಗಳು ಮತ್ತು ಕೆಲವು ಇಲಾಖೆಗಳಲ್ಲಿ ಜನಪ್ರತಿನಿಧಿಗಳು ಇರುತ್ತಾರೆ ಇಂತಹ ಎಲ್ಲರನ್ನು ಕೇಳಬಹುದು) ಸಮಾಜ ಸೇವಕರು,ಸ್ಥಳೀಯ ಸರ್ಕಾರಿ ಕಛೇರಿಗಳಲ್ಲಿ ಕೆಲಸ ಮಾಡುವವರನ್ನು ಕೂಡ ಕೇಳಬಹುದು.

ಎರಡನೇಯ ಹಂತ- ಗುತ್ತಿಗೆದಾರರು, ಶಾಲಾ-ಕಾಲೇಜುಗಳು,ಆರ್.ಎಂ.ಪಿ.ಡಾಕ್ಟರ್‍ಗಳು, ಖಾಸಗಿ ಆಸ್ಪತ್ರೆಗಳು,ದೇವಸ್ಥಾನಗಳು, ಜ್ಯೋತಿಷ್ಯ ಹೇಳುವವರು, ಕೋ-ಆಪರೇಟಿವ್ ಬ್ಯಾಂಕಗಳು, ಸಂಘ-ಸಂಸ್ಥೆಗಳ ಅಧ್ಯಕ್ಷರು ಮತ್ತು ಪಧಾದಿಕಾರಿಗಳು ಮುಂತಾದವರನ್ನು ಎರಡನೇಯ ಹಂತವಾಗಿ ಕೇಳಬಹುದು

ಮೂರನೇಯ ಹಂತ- ಸಾರ್ವಜನಿಕರು, ವ್ಯಾಪಾರಿಗಳು, ವ್ಯಾಪರ-ವ್ಯವಹಾರ ಮಾಡುವವರು,ಸೈನಿಕರು, ಇನ್ನಿತರ ಉದ್ಯೋಗಿಗಳು ಸೇರಿದಂತೆ ಯಾರನ್ನು ಬೇಕಾದರೂ ಕೇಳಬಹುದು. ಮಾತನಾಡುವ ಮತ್ತು ಈ ಯೋಜನೆಯ ಉದ್ದೇಶವನ್ನು ಸರಿಯಾದ ಕ್ರಮದಲ್ಲಿ ವಿವರಿಸುವ ಕಲೆ ಮೊದಲು ಕರಗತ ಮಾಡಿಕೊಂಡು ಹೋಗಬೇಕು.

ಈ ಒಂದು ಯೋಜನೆಯನ್ನು ಸಾಕಾರಗೊಳ್ಳಿಸುವುದು ತಮ್ಮೆಲ್ಲರ ಕೈಯಲ್ಲೇ ಇದೆ. ಇದು ಸಾಕಾರ ಗೊಳ್ಳುವುದರಿಂದ ಕನಸಿನ ಭಾರತದಿಂದ ಸಮಾಜ ಸೇವೆ ಮತ್ತು ದೇಶ ಸೇವೆ ಆಗುತ್ತದೆ. ದೇಶಾಭಿಮಾನವನ್ನು ಜಾಗೃತಗೊಳ್ಳಿಸಲಾಗುವುದು ಜೊತೆಗೆ ಪತ್ರಿಕೆಗೆ ಶಾಶ್ವತ ನೆಲೆ ಸಿಕ್ಕು ಭವಿಷ್ಯದಲ್ಲಿ ಪತ್ರಿಕೆಯೂ ಸತತ ಪ್ರಕಟಗೊಂಡು ತಲುಪುತ್ತದೆ.

ಕನಸಿನ ಭಾರತ ವಾರ್ಷಿಕ ಚಂದಾ-1500/- ಯೋಜನೆ- ಸಾಮಾನ್ಯ ಜನರಿಗಾಗಿ ಈ ಯೋಜನೆ ಮಾಡಲಾಗಿದ್ದು, ಇದು ಒಂದು ವರ್ಷ ಕಾಲ ಮಾಸ,ಪಾಕ್ಷಿಕ ಮತ್ತು ವಾರ ಪತ್ರಿಕೆಗಳು ಅಂಚೆ ಮೂಲಕ ಕಳಿಸಲಾಗುವುದು.

ಜಾಹೀರಾತು- ಮಾಸ ಪತ್ರಿಕೆ ಮತ್ತು ಪಾಕ್ಷಿಕ ಪತ್ರಿಕೆಗಳಲ್ಲಿ ಜಾಹೀರಾತು ನೀಡಬಹುದು. ಅದರ ಬಗ್ಗೆ ಕನಸಿನ ಭಾರತ ವೆಬ್ ಸೈಟ್ ನೋಡಬಹುದು.

ಕೆಲವು ಟಿಪ್ಪಣಿಗಳು
1) ಮಾಸ ಪತ್ರಿಕೆ ಸಕಾರಾತ್ಮ ಸುದ್ಧಿಗಳನ್ನು ಪ್ರಕಟಿಸಿದ್ದರೆ, ಪಾಕ್ಷಿಕ ಪತ್ರಿಕೆಯಲ್ಲಿ ಸ್ಥಳೀಯ ಎಲ್ಲಾ ರೀತಿಯ ಸುದ್ಧಿಗಳು, ಜನರ ಸಮಸ್ಯೆಗಳು, ಸಣ್ಣ-ಸಣ್ಣ ಸುದ್ಧಿಗಳು, ಕಾರ್ಯಕ್ರಮಗಳು ಮುಂತಾದವುಗಳನ್ನು ಪ್ರಕಟಿಸಲಾಗುವುದು.
2) ವಾರ ಪತ್ರಿಕೆಯ ಭ್ರಷ್ಠಾಚಾರವನ್ನು ಬಯಲಿಗೆ ತರಲು ಮೀಸಲಾದ ಪತ್ರಿಕೆ. ತನಿಖಾ ವರದಿಗಳು, ಸರ್ಕಾರಿ/ಅರೆ ಸರ್ಕಾರಿ/ಖಾಸಗಿ ವ್ಯಕ್ತಿಗಳು ಅಥವಾ ಗುಂಪು ಮಾಡುವ ಭ್ರಷ್ಠಾಚಾರ ಅಥವಾ ಸಾರ್ವಜನಿಕರಿಗೆ ವಂಚನೆ ಮುಂತಾದವುಗಳನ್ನು ಸ್ವವಿವರವಾಗಿ ಪ್ರಕಟಿಸಲಾಗುವುದು. ಯಾವುದೇ ಅಧಿಕಾರಿ/ರಾಜಕಾರಣಿ/ಸಮಾಜ ಸೇವಕ/ಪತ್ರಕರ್ತ ಅಥವಾ ಯಾವುದೇ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿ ವಂಚನೆ ಅಥವಾ ಭ್ರಷ್ಠಾಚಾರ ಮಾಡಿದ್ದು ಇದರ ಬಗ್ಗೆ ಸುದ್ದಿ ಮಾಡಿ. ನಾವು ಯಾವುದೇ ಪ್ರಭಾವಕ್ಕೂ ಹೆದರುವುದಿಲ್ಲ. ಪ್ರಕಟಿಸಲು ನಾವು ಸಿದ್ದ.
3) ಸುದ್ಧಿ ಮಾಡುವುದು ಅಂದರೆ ನಾಲ್ಕು ಸಾಲು ಬರೆದು ಕಳಿಸುವುದು ಅಲ್ಲ, ಅದರ ಸಂಪೂರ್ಣ ವಿವರ ಇರಬೇಕು. ಹೆಡ್ ಲೈನ್ ಇರಬೇಕು ಜೊತೆಗೆ ಸಾಕ್ಷಿ ಇರಬೇಕು.
4) ಬೇರೆ ಮಾಧ್ಯಮದವರು ಅಪರಾಧ ಮಾಡಿದ್ದರೇ ನಾವು ಸಹಿಸುವುದಿಲ್ಲ ಅಂದರೆ ಅದನ್ನು ಸುದ್ಧಿ ಮಾಡುತ್ತೇವೆ, ಇನ್ನು ನಮ್ಮವರು ಏನಾದರೂ ತಪ್ಪು ಮಾಡಿದರೇ ಸುದ್ದಿಯ ಜೊತೆಗೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು.
5) ನಮ್ಮ ಎಲ್ಲಾ ವರದಿಗಾರರ ಬಗ್ಗೆ ಹಿನ್ನಲೆ ಮತ್ತು ಪ್ರಸ್ತುತ ಕೆಲಸಗಳ ಬಗ್ಗೆ ಗಮನ ಹರಿಸಲಾಗಿದೆ ಮತ್ತು ಸದಾ ಕಾಲವು ಗಮನ ಇರುತ್ತದೆ.
6) ಉತ್ತಮ ಉದ್ದೇಶ ಮತ್ತು ಭವಿಷ್ಯದ ಕನಸಿನ ಪತ್ರಿಕೆ ಇದಾಗಿದ್ದರಿಂದ ನೀವು ಬೆಳೆಯಿರಿ ಜೊತೆಗೆ ಪತ್ರಿಕೆಯನ್ನು ಬೆಳೆಸಿ.
7) ನಿಮ್ಮಲ್ಲಿ ಇರುವ ನ್ಯೂನತೆಗಳನ್ನು ಮರೆಯಿರಿ, ಉತ್ತಮ ಉದ್ದೇಶಕ್ಕಾಗಿ ಕೆಲಸ ಮಾಡಿ, ಮಾಡಿದ ಕೆಲಸಕ್ಕೆ ಕಮೀಷನ್ ಬರುತ್ತದೆ ಜೊತೆಗೆ ಉತ್ತಮ ಕೆಲಸಗಾರರಿಗೆ ಕಂಪನಿಯಲ್ಲಿ ಪಾಲುದಾರಿಕೆ ನೀಡಲಾಗುವುದು. ನಿಮ್ಮ ಭವಿಷ್ಯಕ್ಕಾಗಿ ಮುಂದಿನ ಪೀಳಿಗೆಗಾಗಿ ದುಡಿಯಿರಿ, ಗಳಿಸಿ ಮತ್ತು ಕಂಪನಿ ಕಟ್ಟಿ ಬೆಳೆಸಿ.
8) ಮೋಸ ಮಾಡುವವರಿಗೆ ನೂರು ದಾರಿ ಇರುವಾಗ ಒಳ್ಳೆಯ ಕೆಲಸ ಮಾಡುವವರಿಗೆ ಒಂದು ದಾರಿಯೂ ಸಿಗುವುದಿಲ್ಲವೇ ವಿಚಾರ ಮಾಡಿ, ಒಳ್ಳೆಯತನ ಗೆದ್ದೆ ಗೆಲ್ಲುತ್ತದೆ.
9) ಆಗುವುದಿಲ್ಲ, ನಮ್ಮ ಸುತ್ತಲು ಎಷ್ಟೊಂದು ವರದಿಗಾರರಿದ್ದಾರೆ ಅನ್ನುವ ಕೆಲವು ನಕಾರಾತ್ಮಕ ಮನಃಸ್ಥಿತಿಯನ್ನು ಮೊದಲು ಬಿಡಿ, ಪ್ರಪಂಚ ವಿಶಾಲವಾಗಿದೆ, ಯಾವುದೇ ವರದಿಗಾರರಿಗೂ ಇಷ್ಟೇ ಪ್ರದೇಶ ಅಂತ ಸೂಚನೆ ನೀಡಿಲ್ಲ, ಎಲ್ಲಿ ಬೇಕಾದರೂ ಕೆಲಸ ಮಾಡಬಹುದು, ಎಷ್ಟೇ ವರದಿಗಾರರು ಇದ್ದರೂ ಮಾಡಬಹುದು,ಜನಸಂಖ್ಯೆ ಹೆಚ್ಚಾಗಿದೆ, ಕೆಲಸ ಮಾಡುವ ಮನಸ್ಸು ಬೇಕು ಅಷ್ಟೇ, ಮನಸ್ಸು ಮಾಡಿ ಹೋರಡಿ ಕೆಲಸ ಏಕೆ ಆಗುವುದಿಲ್ಲ ನೀವೆ ನೋಡಿ.
10) ಉತ್ತಮ ಒಳ್ಳೆಯವರಿಗೆ ಉತ್ತಮ ವಿಚಾರ ತಿಳಿಸಿ, ಮೋಸಗಾರರಿಗೆ ಭಯ ಹುಟ್ಟಿಸಿ, ಶಿಷ್ಟರ ರಕ್ಷಣೆ ಭ್ರಷ್ಟರ ಸಂಹಾರವೆ ನಡೆಯಲಿ.
11) ಬದುಕಿನ ಹೋರಾಟ ತಾಯಿಯ ಗರ್ಭದಿಂದಲ್ಲೆ ಪ್ರಾರಂಭವಾಗಿದ್ದು ಕೊನೆ ಉಸಿರು ಇರುವವರಿಗೆ ಇರುತ್ತದೆ, ಇಂತಹ ಬದುಕಿನ ಹೋರಾಟದಲ್ಲಿ ಉತ್ತಮ ವಿಚಾರಕ್ಕಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ.
12) ಭೂಮಿಯ ಮೇಲೆ ದೇವರು ಪ್ರತಿಯೊಬ್ಬರಿಗೂ 24 ಗಂಟೆ ಸಮಯವನ್ನೇ ನೀಡಿದ್ದಾನೆ, ಈಗಾಗಲೇ ಕೆಲವು ವರದಿಗಾರರು ಚಂದಾ ಮಾಡಿಸಿದ್ದಾರೆ, ನೀವು ಮಾಡಿಸಿ, ಸಮಯವನ್ನು ಸರಿಯಾಗಿ ಬಳಸಿ.
13) ನಂಬಿಕೆ ಮುಖ್ಯ ನೀವು ನಂಬಿ ಆಗ ಮಾತ್ರ ಇತರರನ್ನು ನಂಬಿಸಬಹುದು.
14) ಕಂಪನಿಯ ಹಣವನ್ನು ಕಂಪನಿಯ ಖಾತೆಗಳಿಗೆ ಮಾತ್ರ ಜಮಾ ಮಾಡಿ, ಯಾರ ವೈಯಕ್ತಿಕ ಖಾತೆಗಳಿಗೂ ಹಣ ಹಾಕಬೇಡಿ.
15) ಉತ್ತಮ ಬಲಿಷ್ಠ ಭಾರತಕ್ಕಾಗಿ ಈ ಪ್ರಯತ್ನದಲ್ಲಿ ಕೈ ಜೋಡಿಸಿದ್ದಾಗಲೆ ನಿಮಗೆ ಆಸಕ್ತಿ ಇದೆ ಅಂತ, ಇನ್ನಷ್ಟು ಪ್ರಯತ್ನ ಮಾಡಿ.
16) ನೂರು ಸಾರಿ ಪ್ರಯತ್ನಿಸಿದಾಗಲ್ಲೂ ಸಿಗದೇ ಇರುವುದು ನೂರಾ ಒಂದನೇ ಪ್ರಯತ್ನಕ್ಕೆ ಸಿಗಬಹುದು, ಪ್ರಾಮಾಣಿಕ ಪ್ರಯತ್ನ ಮಾಡಿ.
17) ಪ್ರತಿಯೊಬ್ಬರು ಕಾರ್ಯ ಸಿದ್ಧಿಗಾಗಿ ತೆರೆದ ಕಣ್ಣಿನಿಂದ ನಿಮ್ಮನೊಮ್ಮೆ ಮತ್ತು ಸುತ್ತಲಿನ ಪ್ರಪಂಚ ಒಮ್ಮೆ ನೋಡಿ, ಎಲ್ಲವೂ ಸಾದ್ಯ.
18) ಆಗಲ್ಲಾ ಅನ್ನುವುದು ಯಾವುದು ಇಲ್ಲ ಏಕೆಂದರೆ ಈ ಭೂಮಿಯ ಸುತ್ತಲಿನ ವಸ್ತುಗಳಿಂದ ಹಿಡಿದು ಆಕಾಶ ನೌಕೆಯ ವರೆಗೂ ಮನುಷ್ಯನ ಸಂಶೋದನೆ ಆಗಿದೆ. ಒಮ್ಮೆ ಮನದಾಳದಿಂದ ಸುತ್ತಲು ನೋಡಿ ಏಕೆ ಆಗುವುದಿಲ್ಲ ನಿಮ್ಮಿಂದ ಆಗುತ್ತದೆ. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ.
19) ಕನಸಿನ ಭಾರತದಲ್ಲಿ ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಬಂಧಿಸಿದ ವಿಷಯಕ್ಕೆ ಆಯಾ ವಿಭಾಗದ ಮುಖ್ಯಸ್ಥರಿಗೆ ಕರೆ ಮಾಡಿ.
20) ಕೆಲಸ ಮಾಡುವವರಿಗೆ ಮಾತ್ರ ಇಲ್ಲಿ ಅವಕಾಶ. ಯಾವುದೇ ಜಾತಿ,ಧರ್ಮ ಅಥವಾ ಪ್ರಭಾವದಿಂದ ನಿಮ್ಮ ಐ.ಡಿ ಕಾರ್ಡ್ ರಿನಿವಲ್ ಆಗುವುದಿಲ್ಲ. ಕೆಲಸದಿಂದ ಮಾತ್ರ ಅದು ಸಾಧ್ಯ, ಕಟ್ಟಿ ಬೆಳೆಸಿದರೆ ತಮ್ಮ ಸುತ್ತಲು ನಿಮಗೂ ಮರ್ಯಾದೆ ಮತ್ತು ಪತ್ರಿಕೆಯೂ ಬೆಳೆಯುತ್ತದೆ.
ಜನವರಿ 1 2020 ರಿಂದ ಮೇ 1 2020 ರ ಒಳಗಾಗಿ ಪ್ರತಿಯೊಬ್ಬ ವರದಿಗಾರ/ ಪ್ರಧಾನ ವರದಿಗಾರ/ಜಿಲ್ಲಾ ವರದಿಗಾರ/ ಉಪ ಸಂಪಾದಕರು / ಕಾರ್ಯನಿರ್ವಾಹಕ ಸಂಪಾದಕ ಎಲ್ಲರೂ ತಲಾ ( ಒಬ್ಬರಂತೆ) ಕನಿಷ್ಠ 100 ವಾರ್ಷಿಕ ಚಂದಾ ಮತ್ತು 25 ಅಜೀವ ಸದಸ್ಯತ್ವ ಮಾಡಿಸಲೇಬೆಕು. ಒಂದು ವೇಳೆ ಮಾಡದೇ ಇದ್ದರೆ ಯಾವುದೇ ಕಾರಣಕ್ಕೂ ಮೇ 30 2020 ರ ಅವಧಿ ಮುಗಿಯುವ ಐ.ಡಿ ಕಾರ್ಡ್‍ಗಳನ್ನು ರೀನಿವಲ್ ಮಾಡುವುದಿಲ್ಲ, ಇದು ಎಲ್ಲರಿಗೂ ಅನ್ವಯಿಸುತ್ತದೆ, ಈ ವಿಚಾರವು ಪತ್ರಿಕೆಯ ಅಭಿವೃದ್ಧಿ ಮತ್ತು ಭವಿಷ್ಯದ ದೃಷ್ಟಿಯಿಂದ ಮಾಡಲಾಗಿದ್ದು ಇದರಿಂದ ಯಾರಿಗೂ ವಿನಾಯಿತಿ ಕೊಡುವುದಿಲ್ಲ. ಪ್ರತಿಯೊಬ್ಬರು ಮಾಡಲೇಬೇಕು. ಯಾವುದೇ ಕಾರಣ ಸಮಜಾಯಿಸುವಿಕೆ ಒಪ್ಪುವುದಿಲ್ಲ.
ಸಾಧ್ಯವಿದೆ ಮಾಡಿ. ದಯವಿಟ್ಟು ಭವಿಷ್ಯದ ನೋಟದಲ್ಲಿ ನೋಡಿಯಾದರೂ ಕೆಲಸ ಮಾಡಿ. ಆಗುತ್ತದೆ ಮಾಡಿ.

ತಮ್ಮ ಜೊತೆಗಾರ
ರಮೇಶ.ಎಸ್.ಜಿ
ಸಂಪಾದಕರು.

Leave a Reply

Your email address will not be published. Required fields are marked *

X